ಶ್ಲೋಕ ಮಾತೃಭೂಮಿ

ರತ್ನಾಕರಧೌತಪದಂ ಹಿಮಾಲಯಕಿರೀಟಿನೀಂ ಬ್ರಹ್ಮರಾಜಶ್ರೀರತ್ನಾಢ್ಯಾಂ ವಂದೇ ಭಾರತಮಾತರಮ್

ಮೇಲಿನ ಶ್ಲೋಕದ ಅರ್ಥವು ಕೆಳಕಂಡಂತಿದೆ: ಮಹಾಸಾಗರಗಳು ನಿಮ್ಮ ಪಾದಗಳನ್ನು ತೊಳೆಯುತ್ತವೆ. ಹಿಮಾಲಯ ಪರ್ವತಗಳು ನಿಮ್ಮನ್ನು ಕಿರೀಟದಂತೆ ಅಲಂಕರಿಸುತ್ತವೆ. ಹಲವಾರು ಸಂತರು ಮತ್ತು ರಾಜ ಋಷಿಗಳು ಭಾರತವನ್ನು ಆರಾಧಿಸುವ ರತ್ನಗಳಂತಿದ್ದಾರೆ. ನಿನಗೆ ನನ್ನ ನಮಸ್ಕಾರಗಳು.

ಇದು ನಮ್ಮ ಮಾತೃಭೂಮಿಯನ್ನು ಸ್ತುತಿಸುವ ಮತ್ತೊಂದು ಸಂಸ್ಕೃತ ಶ್ಲೋಕ. ಸಂಸ್ಕೃತ ಭಾಷೆಯು ಬಹುಮುಖ ಭಾಷೆಯಾಗಿದ್ದು, ಇದರಲ್ಲಿ ಒಬ್ಬರು ಅರ್ಥ ಪೂರ್ಣ  ಮತ್ತು ಕಾವ್ಯಾತ್ಮಕತೆಯೊಂದಿಗೆ ಶ್ಲೋಕಗಳನ್ನು ರಚಿಸಬಹುದು. ಇದು ದಕ್ಷಿಣದಲ್ಲಿ ಸಾಗರಗಳು ಮತ್ತು ಉತ್ತರದಲ್ಲಿ ಹಿಮಾಲಯದಿಂದ ಸುತ್ತುವರಿದ ಭೂಮಿಯ ಭೌಗೋಳಿಕತೆಯನ್ನು ಸುಂದರವಾದ ಕಾವ್ಯಾತ್ಮಕ ಭಾಷೆಯಲ್ಲಿ ಶ್ಲಾಘಿಸುವ ಶ್ಲೋಕವಾಗಿದೆ.